Sep 9, 2008

ಸಂತರೋ ಅಥವಾ ತತ್ವಜ್ಜ್ನ್ಯಾನಿಯೋ?

ಕನ್ನಡದ ಕಭೀರರೆಂದೆ ಕರೆಯಲ್ಪಟ್ಟವರು ೧೯ ನೇ ಶತಮಾನದ ತತ್ವಜ್ಜ್ನ್ಯಾನಿ ಶ್ರೀ ಸಂತ ಶಿಶುನಾಳ ಶರೀಫ್. ಶಿಶುನಾಳ ಶರೀಫ್ ರವರು (೧೮೧೯-೧೮೮೯) ಸಂತರೋ ಅಥವಾ ಓರ್ವ ಕವಿಯೋ ಅಥವಾ ಸಮಾಜ ಸುಧಾರಕರೋ? ಯಾರಿರಬಹದು? ಆಂಗ್ಲರ ಆಡಳಿತದಲ್ಲಿದ್ದ ನಮ್ಮ ಭಾರತ ದೇಶವು ಜಾತೀಯಾತ 'ಧರ್ಮ-ಕರ್ಮ'ಗಳ ಗೊಂದಲಕ್ಕೆ ಸಿಲುಕಿಕೊಂಡು ತತ್ತರಿಸುತ್ತಿದ್ದ ಕಪ್ಪು ದಿನಗಳಲ್ಲಿ ಈಗಿನ ಉತ್ತರ ಕರ್ನಾಟಕದ ಒಬ್ಬ ಮುಸಲ್ಮಾನ್ ವ್ಯಕ್ತಿಯು, ತನ್ನ ಸರಳ ತತ್ವ ಪದಗಳಿಂದ, ಜನರ ಮನ ಗೆದ್ದು, ಸಾಮಾಜಿಕ ಪರಿವರ್ತನೆಯ ಕಿಡಿ ಹಚ್ಚಿದ ಧರ್ಮಪ್ರವರ್ತಕರೇ ಶ್ರೀ 'ಸಂತ ಶಿಶುನಾಳ ಶರೀಫರು'. ಹಿಂದೂ ಹಾಗು ಮುಸಲ್ಮಾನರ ಒಗ್ಗಟ್ಟಿಗೆ ಬಹಳ ಶ್ರಮಿಸಿದ ದೈವಾನುಗ್ರಹ ಕವಿ ಶರೀಫರು ಹುಟ್ಟಿದ್ದು ಉತ್ತರ ಕನ್ನಡ ಹಾವೆರಿಯಲ್ಲಿಯಂತೆ.

"ಸೋರುತಿಹುದು ಮಾನಿಯಾ ಮಾಳಿಗೆ", "ಅಳಬೇಡ ತಂಗಿ ಅಳಬೇಡ", "ಹಾಕಿದ ಜನಿವಾರವ", "ಕೊಡಗಾನ ಕೋಳಿ ನುಂಗಿತ್ತಾ" ,"ತರವಲ್ಲ ತಗಿ ನಿನ್ನ ತಂಬೂರಿ"..... ಹೀಗೆ ಹಲವಾರು ಸುಂದರ ತತ್ವ ಪದಗಳನ್ನು ಶರೀಫರು, ತಮ್ಮಜ್ಞಾನ ಮತ್ತು ಭಕ್ತಿಯನ್ನು ಸಮಾಜದ ಪರಿವರ್ತನೆಗೆ ಮುಡಿಪಿಟ್ಟು, ಅದ್ಭುತವಾಗಿ ರಚಿಸಿದ್ದಾರೆ.

ಶರೀಫಾರ ಬಗ್ಗೆ ವಿಕಿಪೀಡಿಯಾನಲ್ಲಿ ಓದಿರಿ (Shishunala Sharif on Wikipedia)


ಶರೀಫ್
ಒಂದು ಸುಂದರ ಪದ -
"
ಸೋರುತಿಹುದು ಮನಿಯ ಮಾಳಿಗಿ, ಅಜ್ಞಾನದಿಂದ, ಸೋರುತಿಹುದು ಮಣಿಯ ಮಾಳಿಗಿ
ದಾರೂ ಕಟ್ಟಿ ಮಾಲ್ಪರಿಲ್ಲ
ಕಾಲಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕು ಚಪ್ಪರ ಜೆರುಗಿಂಡಿ
ಮೇಲಕೇರಿ ಹೋಗಲಾರೆ

ಕರಕಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬೀ ಮುತ್ತಿ
ಜಲದ ಭರದಿ ಸರಿಯೇ ಮಣ್ಣು
ಒಳಗೆ ಹೊರಗೆ ಏಕವಾಗಿ

ಸೋರುತಿಹುದು ಮನಿಯ ಮಾಳಿಗಿ, ಅಜ್ಞಾನದಿಂದ, ಸೋರುತಿಹುದು ಮಣಿಯ ಮಾಳಿಗಿ

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಎಂತೋ ಶಿಶುನಾಳಾಧೀಶ ತಾನು
ನಿಂತು ಪೋರೆವೇನು ಎಂದು ನಂಬಿದೆ

ಸೋರುತಿಹುದು ಮನಿಯ ಮಾಳಿಗಿ, ಅಜ್ಞಾನದಿಂದ, ಸೋರುತಿಹುದು ಮಣಿಯ ಮಾಳಿಗಿ"

ಈ ಹಾಡನ್ನು ರಘು ದೀಕ್ಷಿತ್ ರವರ ಕಂಠ ಸಿರಿಯಲ್ಲಿ ಕೇಳಿ ಆನಂದಿಸಿರಿ




ನಾಗಾಭರಣ ನಿರ್ದೇಶನದ ಹಾಗು ಸಿ. ಅಶ್ವಥ್ ಅವರ ಸಂಗೀತದ "ಸಂತ ಶಿಶುನಾಳ ಶರೀಫ್" ಚಿತ್ರದ ಕೆಲವು ಹಾಡುಗಳನ್ನು ಇಲ್ಲಿ ವೀಕ್ಷಿಸಿ.

Editorial and Opinion | The Times of India

India Today | Cover Story

The Financial Express

India Today | Economy

India Business and Markets News

Bangalore - Times of India

India Today | NATION

Cricket

Cricket Updates

Rediff Columns

Shree Abdul Kalam