ಶ್ರಾವಣ ಮಾಸದ ಪ್ರಥಮ ದೊಡ್ಡ ಹಬ್ಬ -- ಸುಮಂಗಲಿಯರಿಗೆ ಸೌಭಾಗ್ಯಪ್ರದವಾಗಿರುವ "ಶ್ರೀ ವರಮಹಾಲಕ್ಷ್ಮೀ ವ್ರತ". ನಿಮ್ಮೆಲ್ಲರಿಗೂ ಈ ದಿನದ ಶುಭಾಶಯಗಳು. ಸುಮಾರು ೫೦೦ ವರುಷಗಳ ಹಿಂದೆ, ಕರ್ನಾಟಕ ಸಂಗೀತದ ಪಿತಾಮಹರಾದ ಶ್ರೀ ಪುರಂದರ ದಾಸರಿಂದ ರಚಿಸಲ್ಪಟ್ಟು, ಶತಮಾನಗಳಿಂದ ಕೋಟ್ಯಾಂತರ ಜನರು ಹಾಡಿ ಶ್ರೀ ಮಹಾಲಕ್ಷ್ಮಿಯನ್ನು ಆರಾಧಿಸುವ ಈ ಸುಮದುರ ಗೀತೆಯನ್ನು ಕೆಳಗೆ ಓದಿರಿ..."ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ
ಹೆಜ್ಜಯ ಮೇಲೆ ಹ್ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ
ಕನಕ ವ್ರಷ್ಟಿಯ ಕರೆಯುತ ಬಾರೆ ಮನ ಕಾಮನಯ ಸಿದ್ಧಿಯ ತೊರೆ
ದಿನಕರ ಕೋಟಿ ತೇಜದಿ ಹೊಳೆವ ಜನಕರಯನ ಕುಮಾರಿ ವೇದ
ಅತ್ತಿತ್ತಲಗಲದೆ ಭಕ್ತರ ಮನೆಯಲಿ ನಿತ್ಯ ಮಹೋತ್ಸವ ನಿತ್ಯ ಸುಮಂಗಳ
ಸತ್ಯವ ತೋರುವ ಸಾಧು ಸಜ್ಜನರ ಚಿತ್ತದಿ ಹೊಳೆವ ಪುತ್ತಳಿ ಬೊಂಬೆ
ಸಂಖ್ಯೆ ಇಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುವುತ ಬಾರೆ
ಕುಂಕುಮಾನ್ಕಿತೆ ಪಂಕಜ ಲೋಕಾನೆ ವೆಂಕಟರಮಣನ ಬಿಂಕದ ರಾಣಿ
ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪುಜಯ ವೇಳಗೆ
ಅಕ್ಕರೆಯುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠಲನ ರಾಣಿ
ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ"
ಈ ಹಾಡನ್ನು ಈ ಎರಡು ಲಿಂಕಿನಲ್ಲಿ ಕೇಳಿ ಆನಂದಿಸಿರಿ
ಪಂಡಿತ್ ಭೀಮಸೇನ್ ಜೋಷಿ ಹಾಗು ಸೌ. ಸುಧಾ ರಘುನಾಥನ್ರವರ ಕಂಠ ಸಿರಿವಲ್ಲಿ
ಹಾಗು ಈ ಶುಭದಿನದಂದು ಕೇಳಿ/ನೋಡಿ
ಶ್ರೀ ಮಹಾಲಕ್ಷ್ಮಿ ಅಷ್ಟಕಂ
ಶ್ರೀ ಅನ್ನಪೂರ್ಣ ಅಷ್ಟಕಂ
ಶ್ರೀ ಆದಿ ಶಂಕರಾಚಾರ್ಯರ 'ಅನ್ನಪೂರ್ಣ ಸ್ತೋತ್ರ' (ಜೀ ವೀ ಇಯರ್ ರವರ ಚಿತ್ರದಿಂದ)