ಶ್ರೀ ದ. ರಾ. ಬೇಂದ್ರೆ ಯವರ 'ನಾಕು ತಂತಿ' (4 strings) ಕಾವ್ಯ ಸಂಗ್ರಹವನ್ನು ಓದಿ ಆನಂದಿಸಿರಿ. This poem, which is an epitome of his vivid imagination has been expressed powerfully to reflect life in its purest symbolic form."ನಾನು, ನೀನು, ಆನು, ತಾನು" ಈ ಕಾವ್ಯದ ನಾಲ್ಕು ತಂತಿಗಳೇ? ಅಂದರೆ ಅವೇನು? ಈ ನಾಲ್ಕು ತಂತಿಗಳ ಮಿಡಿತವು ಎನನ್ನ್ನು ಸೂಚಿಸುತ್ತದೆ? ಬನ್ನಿ... ಈ ನಾಲ್ಕು ತಂತಿಯ ನೆರಳಲ್ಲಿ ಕೆಲ ಕಾಲ ನಮ್ಮ ಭಾವನೆಗಳೊಂದಿಗೆ ಸ್ಪಂದಿಸೋಣ.
(ಭಾಗ ೧ )ಆವು ಈವಿನ, ನಾವು ನೀವಿಗೆ| ಆನು ತಾನದ, ತನನನಾ
ನಾನು ನೀನಿನ, ಈ ನಿನಾನಿಗೆ| ಬೇನೆ ಏನೋ, ಜಾಣಿ ನಾ
ಚಾರು ತಂತ್ರಿಯ, ಚರಣ ಚರಣದ| ಘನಘನಿತ ಚತುರ್ರಸ್ವನಾ
ಹತವೊ ಹಿತವೊ, ಆ ಅನಾಹತಾ|ಮಿತಿಮಿತಿಗೆ ಇತಿ, ನನನನಾ
ಬೆನ್ನಿನಾನಿಕೆ, ಜನನ ಜಾನಿಕೆ| ಮನನವೇ ಸಹಿತಸ್ತನಾ
(ಭಾಗ-೨)
ಗೋವಿನ ಕೊಡುಗೆಯ, ಹಡಗದ ಹುಡುಗಿ| ಬೆಡಗಿಲೆ ಬಂದಳು, ನಡು ನಡುಗಿ;
ಸಲಿಗೆಯ ಸುಲಿಗೆಯ, ಬಯಕೆಯ ಒಲುಮೆ| ಬಯಲಿನ ನೆಯ್ಗೆಯ, ಸಿರಿಯುಡುಗಿ;
ನಾಡಿಯ ನಡಿಗೆಯ, ನಲುವಿನ ನಾಲಿಗೆ| ನೆನೆದಿರೆ ಸೋಲುವ, ಸೊಲ್ಲಿನಲಿ;
ಮುಟ್ಟದ ಮಾಟದ, ಹುಟ್ಟದ ಹುಟ್ಟಿಗೆ | ಜೇನಿನ ಥಳಿಮಳಿ, ಸನಿಹ ಹನಿ;
ಬೆಚ್ಚಿದ ವೆಚ್ಚವು, ಬಸರಿನ ಮೊಳಕೆ| ಬಚ್ಚಿದ್ದಾವದೊ, ನಾ ತಿಳಿಯೆ.
ಭೂತದ ಭಾವ, ಉದ್ಭವ ಜಾವ | ಮೊಲೆ ಊಡಿಸುವಳು, ಪ್ರತಿಭೆ ನವ.
(ಭಾಗ-೩)
ಚಿತ್ತೀಮಳಿ ತತ್ತೀ ಹಾಕತಿತ್ತು, ಸ್ವಾತಿ ಮುತ್ತಿನೊಳಗ
ಸತ್ತಿಯೊ ಮಗನಾ, ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು ಕೂಡಿ
ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೋಲಗ್ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ, ಶ್ರೀ ಗುರುದತ್ತ ಅಂದ
(ಭಾಗ-೪)
ನಾನು, ನೀನು, ಆನು, ತಾನು
ನಾಕೆ ನಾಕು ತಂತಿ
ಸೊಲ್ಲಿಸಿದರು, ನಿಲ್ಲಿಸಿದರು, ಓಂ ಓಂ ದಂತಿ!
ಗಣನಾಯಕ, ಮೈ ಮಾಯಕ, ಸೈ ಸಾಯಕ ಮಾಡಿ
ಗುರಿಯ ತುಂಬಿ, ಕುರಿಯ ಕಣ್ಣು | ಧಾತು ಮಾತು ಕೂಡಿ.
ಈ ಕವನದ ನಿಘೋಡಾರ್ಥವನ್ನು ಅತ್ಯಂತ ಸುಂದರವಾಗಿ ಈ "ಸಲ್ಲಾಪ"ವೆಂಬ ಬ್ಲಾಗಿನಲ್ಲಿ ವಿವರಿಸಲಾಗಿದೆ. ಹೆಚ್ಹಿನ ಓದುಗೆಗೆ ಬೇಟಿ ನೀಡಿ "ಸಲ್ಲಾಪ".

|