ಪತ್ರ ಬರುತಿದೆ ಇಂದು ನಿಮ್ಮ ಹೃದಯದ ಮುಂದೆ
ನಿಮಗೆ ನೆನಪಾಗುವುದು ನಾಡ ಬಾಳು
ಕಡಲಾಚೆಗಿರುವ ಬಂಧು ಮಿತ್ರರೇ..
ಕರೆಯುತಲಿದೆ ಹೊಸ ವರುಷ -- ಶುಭವನ್ನು ಕೋರಿ ನಿಮಗೆ.
ಕನ್ನಡದ ಕೋಗಿಲೆಯ ಕೇಳಿ ಬನ್ನಿರಿ ಎಲ್ಲ
ನೀವು ಹತ್ತಿರದವರು ದೂರವಲ್ಲ
ಎಲ್ಲ ಎಲ್ಲರ ಬಾಳಿಗೆ ಒಲವು ತಂದಿಹುದಿಲ್ಲಿ
ರಮ್ಯಥರ ಭಾವಗಳ ಸ್ವರ್ಣ ಲಹರಿ
ದೂರ ನೆಲಸಿದ್ದೀವಿ ಎಂಬ ಕೊರಗನು ತ್ಯಜಿಸಿ
ನೆನೆಯುತ್ತಾ ಕುಲಿತುಬಿಡಿ ಹರುಷದಿಂದ
ಈ ನಿಮ್ಮ ಆಪ್ತನು ಕರೆಯುತ್ತಿರುವನು ಒಲವಿನಿಂದ
ಪತ್ರ ಬರುತಿದೆ ಇಂದು ಕಡಲು ಸೆರಗನು ದಾಟಿ
ಕಿವಿಗೆ ಇಂಪಾಗುವುದು ಕನ್ನಡದ ಧನಿ;
ಕನ್ನಡದ ಸ್ವಪ್ನ- ಸುಂದರಿಯ ಸೋಂಕಿಗೆ ಅರಳಿ
ನಿಮ್ಮ ಜೀವನದ ಹಾದಿ ತುಂಬಿ ಕೊಳ್ಳಲಿ..
ನಿಮ್ಮೆಲ್ಲರಿಗೂ ೨೦೦೯ ಹೊಸ ವರುಷದ ಶುಭಾಶಯಗಳು!